Home
Welcome to the website of Town Municipal Council Shikaripura
The Town Municipal Council (TMC) Shikaripura was constituted in 1936. It is situated at a distance of 52 Kms from Shimoga. Shikaripura town is a historic place where Akkamahadevi a famous poetess birth in Uduthadi which is near to Shikaripura . The Town has the famous Anjaneya temple having crores of saints. The Balligavi and Thalagunda and Uduthadi stands at 10 Kms of the Town. It has a population of 36,024 as per census 2011. The TMC has 23 wards and equal number of councilors and 5 Numbers of Nominee Councilors. Shikaripura TMC stretches to an area of 21.46 SqKms.
24 Hours Help Line Service - Dial 08187-222771
ಗಣಕೀಕರಣ: ಶಿಕಾರಿಪುರ ಪುರಸಭೆಯು ಆಸ್ತಿ ತೆರಿಗೆ ಸಂಗ್ರಹಣೆಯನ್ನು ಗಣಕೀಕೃತಗೊಳಿಸಲಾಗುತ್ತಿದೆ. ಇದರ ಜೊತೆಗೆ 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಪುರಸಭೆ ಶಿಕಾರಿಪುರ ದಲ್ಲಿ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
COMPUTARIZATION: We are very happy to inform the citizens of Shikaripura town that we have computerizing the collection of Property Tax , Birth and Death certificates from 1999 to till date under state Government KMRP computerization scheme, from now on wards citizens are requested to visit the Town Municipal Council, Shikaripura and getting of Birth and Death certificates by paying service fee. Citizens are requested to make use of this facility.
ಘನತ್ಯಾಜ್ಯ ವಸ್ತು ನಿರ್ವಹಣೆ: ಪುರಸಭೆಯ 23-ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಮಾಡಲಾಗುತ್ತಿದೆ. ಇದರಲ್ಲಿ ಬೀದಿಗುಡಿಸುವುದು ಮತ್ತು ಕಸ ಸಾಗಾಣಿಕೆ ಸೇರಿಕೊಂಡಿರುತ್ತದೆ. ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ ನಗರ ನ್ಯೆರ್ಮಲ್ಯವನ್ನು ಕಾಪಾಡಲು ಸಹಕರಿಸುವುದು. ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಮನೆ ಮನೆ ಕಸ ಸಂಗ್ರಹಣೆ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸಲು ತಳ್ಳುವ ಗಾಡಿ ಮತ್ತು ಆಟೋ ಟಿಪ್ಪರ್ ಸೌಲಭ್ಯ ಪ್ರಾರಂಭಿಸಿದ್ದು, ಸಾರ್ವಜನಿಕರು ಕಸವನ್ನು ಸಾರ್ವಜನಿಕ ರಸ್ತೆ, ಖಾಲಿ ನಿವೇಶನ, ಚರಂಡಿಯಲ್ಲಿ ಹಾಕಬಾರದು. ಕಸವನ್ನು ಹಸಿ ಕಸ(ಕೊಳೆಯುವ ಕಸ), ಒಣ ಕಸ(ಕೊಳೆಯದಿರುವ ಕಸ) ವಿಂಗಡಿಸಿ, ತಳ್ಳುವ ಗಾಡಿ ಮತ್ತು ಆಟೋ ಟಿಪ್ಪರ್ ಗೆ ಕಸ ನೀಡತಕ್ಕದ್ದು, ತಳ್ಳುವ ಗಾಡಿ ಬಾರದಿದ್ದಲ್ಲಿ, ಚರಂಡಿ ಮತ್ತು ರಸ್ತೆಗೆ ಕಸವನ್ನು ಹಾಕದೇ ಪುರಸಭೆಯ ಟ್ರ್ಯಾಕ್ಟರ್ ಅಥವಾ ಕಂಟೈನರ್ ಗೆ ಹಾಕಲು ಸೂಚಿಸಿದೆ. ತಪ್ಪಿದ್ದಲ್ಲಿ ಅಂತವರ ಮನೆ ಮುಂದಿನ ಚರಂಡಿ ರಸ್ತೆ ಸ್ವಚ್ಚಗೊಳಿಸುವುದಿಲ್ಲ ಎಂದು ತಿಳಿಯುವುದು.- ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
Solid Waste Management:
Solid Waste Management in 23 wards has been outsourced. It includes street sweeping and waste transportation. Citizens has to encourage the Door to Door collection activities in the wards and pay the service charges as per the MSW-rules for door-to-door collections. If you have any complaints regarding solid waste management please call our helpline No-08187-222771. Help us to keep your city clean and hygienic. -BY Chief Officer, TMC, Shikaripura.
ಬೀದಿ ದೀಪಗಳ ನಿರ್ವಹಣೆ: ಪುರಸಭೆಯ ಬೀದಿ ದೀಪಗಳ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ
ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ಸರ್ಕಾರವು The Employment of Manual scavengers and Construction of Dry Latrines(Prohibition) Act 1993ರ ರೀತ್ಯ ಕಾರ್ಮಿಕರಿಂದ ಶೌಚಾಲಯ ಗುಂಡಿ ಸ್ವಚ್ಚಗೊಳಿಸುವುದನ್ನು ನಿಷೇಧಿಸಿದೆ. ಕಾರಣ ಯಾರೂ ಮನುಷ್ಯರಿಂದ ಶೌಚಾಲಯ ಗುಂಡಿ ಸ್ವಚ್ಚಗೊಳಿಸಬಾರದೆಂದು ಸೂಚಿಸಿದೆ. ಇದನ್ನು ಉಲ್ಲಂಘಿಸಿದವರು ಕಾರಗೃಹ ವಾಸದ ಶಿಕ್ಷೆಗೆ ಗುರಿಯಾಗುತ್ತಾರೆ. ಸಾರ್ವಜನಿಕರಿಗೆ ತಮ್ಮ ಮನೆಯಲ್ಲಿರುವ ಶೌಚಾಲಯ ಗುಂಡಿಯನ್ನು ಸ್ವಚ್ಚಗೊಳಿಸಲು ಹಾಗೂ ಖಾಲಿ ಮಾಡಲು ಪುರಸಭೆಯಿಂದ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಉಪಯೋಗಿಸಲು ಒದಗಿಸಲಾಗಿದೆ ಸಾರ್ವಜನಿಕರು ಸದರಿ ಯಂತ್ರದ ಉಪಯೋಗವನ್ನು ಪುರಸಭೆಗೆ ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ.ತಪ್ಪಿದ್ದಲ್ಲಿ ಶಿಕ್ಷೆಗೆ ಗುರಿಯಾಗುವಿರಿ. ದೂರವಾಣಿ ಸಂಖ್ಯೆ- 08187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಮುಕ್ತಿ ವಾಹಿನಿ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಮುಕ್ತಿವಾಹಿನಿ ಸೇವೆಯನ್ನು ನೀಡಲಾಗುತ್ತಿದೆ ಸಾರ್ವಜನಿಕರು ಸದರಿ ಉಪಯೋಗವನ್ನು ಪುರಸಭೆಗೆ ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ- 08187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಪ್ಲಾಸ್ಟಿಕ್ ಬಳಕೆ ನಿಷೇಧ: ಶಿಕಾರಿಪುರ ಪಟ್ಟಣದ ನಾಗರೀಕರಿಗೆ ಹಾಗೂ ವರ್ತಕರಿಗೆ ತಿಳಿಯಪಡಿಸುವುದೇನೆಂದರೆ, 40 ಮೈಕ್ರೇನ್ ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಹಾಗೂ ಮಾರಾಟ ನಿಷೇದಿಸಿದೆ. ಕಾರಣ ಶಿಕಾರಿಪುರ ಪಟ್ಟಣದ ಸಾರ್ವಜನಿಕರು, ವರ್ತಕರು, ಉತ್ಪಾದಕರು 40 ಮೈಕ್ರೇನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸದಂತೆ, ಮಾರಾಟ ಮಾಡದಂತೆ ಹಾಗೂ ಉತ್ಪಾದಿಸದಂತೆ ತಿಳಿಯಪಡಿಸಿದೆ. ಹಾಗೂ ಈ ಬಗ್ಗೆ ವಿಚಕ್ಷಣ ತಂಡ ಪರಿಶೀಲನೆಗೆ ಬಂದಾಗ ತಪಾಣೆಗೆ ಸಹಕರಿಸಲು ಕೋರಿದೆ. ತಪ್ಪಿದಲ್ಲಿ ಅಂತಹ ಉತ್ಪನ್ನ ಗಳನ್ನು ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದರಿಂದಾಗಬಹುದಾದ ಎಲ್ಲಾ ಕಷ್ಟ ನಷ್ಟಗಳಿಗೆ ನೀವೇ ಹೊಣೆಗಾರರಾಗಿರುತ್ತೀರಿ. –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಸ್ವಚ್ಚತೆ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಹೋಟೆಲ್ ಮಾಲೀಕರಿಗೆ ಹಾಗೂ ಮೀನು ಮತ್ತು ಮಾಂಸ ಮಾರಾಟಗಾರರಿಗೆ ತಿಳಿಯಪಡಿಸುವುದೇನೆಂದರೆ, ತಾವು ತಮ್ಮ ಹೋಟೆಲ್ ನಲ್ಲಿ ಮತ್ತು ಅಂಗಡಿಗಳಲ್ಲಿ ಶುಚಿತ್ವವನ್ನು ಕಾಪಾಡಬೇಕೆಂದು ತಿಳಿಸಲಾಗಿದೆ. –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಬಿಡಾಡಿ ದನಗಳು: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಜಾನುವಾರು ಮಾಲೀಕರು ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಜಾನುವಾರು ಬಿಡದಂತೆ ಜಾಗ್ರತೆ ವಹಿಸಲು ಸೂಚಿಸಿದೆ. ತಪ್ಪಿದಲ್ಲಿ ಅವುಗಳನ್ನು ಬಿಡಾಡಿ ದನಗಳೆಂದು ಪರಿಗಣಿಸಿ, ಪುರಸಭೆ ವಶಕ್ಕೆ ಪಡೆದು ವಿಲೇವಾರಿ ಮಾಡಲಾಗುವುದು. ಕಾರಣ ಜಾನುವಾರುಗಳನ್ನು ರಸ್ತೆಗಳಲ್ಲಿ ಬಿಡದಂತೆ ಕ್ರಮ ಜರುಗಿಸಲು ಸೂಚಿಸಿದೆ. - ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
In The News
ಶಿಕಾರಿಪುರ ಪಟ್ಟಣದಲ್ಲಿ ದಿನಾಂಕ:09-02-2013 ಮತ್ತು 10-02-2013 ರಂದು ವಿದ್ಯುತ್ ವ್ಯತ್ಯಯವಾಗುತ್ತಿರುವ ಕಾರಣ ನೀರು ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.
ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.
ಶಿಕಾರಿಪುರ ಪುರಸಭೆಯಲ್ಲಿ ದಿನಾಂಕ:29-10-2012 ರಂಧು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಅದ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ಶಿಕಾರಿಪುರ ಪುರಸಭೆಯಲ್ಲಿ ದಿನಾಂಕ:23-07-2012 ರಂಧು ಕೌನ್ಸಿಲ್ ಸಾಮಾನ್ಯ ಸಭೆ ನಡೆಯಿತು, ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಶಿಕಾರಿಪುರ ಪುರಸಭೆಗೆ ನೂತನವಾಗಿ ದಿನಾಂಕ: 22-06-2012 ರಂದು ಶ್ರೀ. ಮನೋಹರ್ ರವರು ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಶಿಕಾರಿಪುರ ಪುರಸಭೆಗೆ ನೂತನವಾಗಿ 28-05-2012 ರಂದು ಶ್ರೀಮತಿ. ಜಬೀನಾ ರಹಮತುಲ್ಲಾ ಪಟಿಗಾರ್ ರವರು ಅದ್ಯಕ್ಷರಾಗಿ ನೇಮಕಗೊಂಡಿರುತ್ತಾರೆ.
ಶಿಕಾರಿಪುರ ಪುರಸಭೆಯಲ್ಲಿ ದಿನಾಂಕ: 29-03-2012 ರಂದು 2012-13 ರ ಆಯವ್ಯಯ ಸಭೆಯು ನಡೆಯಿತು. ಪುರಸಭೆ ಅದ್ಯಕ್ಷರು ಆಯವ್ಯಯವನ್ನು ಮಂಡಿಸಿದರು. ಎಲ್ಲಾ ಸದಸ್ಯರು ಮತ್ತು ಮುಖ್ಯಾಧಿಕಾರಿ ಹಾಗೂ ಎಲ್ಲಾ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ 20-01-2012 ರಂದು ಪುರಸಭಾ ಸಾಮಾನ್ಯ ಸಭೆ ನಡೆಯಿತು, ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಸಭೆಯಲ್ಲಿ ಗುರುರಾಜ್ ಜಗತಾಪ್ ರವರನ್ನು ಸ್ಥಾಯಿ ಸಮಿತಿ ಅದ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಪುರಸಭೆ ಕಾರ್ಯಾಲಯ, ಶಿಕಾರಿಪುರ ದಲ್ಲಿ 31/10/2011 ರಂದು ಬೆಳಿಗ್ಗೆ 11:00 ಗಂಟೆಗೆ ಬ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು "ಜಾಗೃತಿ ಅರಿವು ಸಪ್ತಾಹ" ವನ್ನು ಆಚರಿಸಲಾಯಿತು. ಈ ಆಚರಣೆಯಲ್ಲಿ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸರ್ಕಾರದಿಂದ ಕೊಟ್ಟ ಒಂದು ಪ್ರತಿಜ್ಙೆಯನ್ನು ತೆಗೆದುಕೊಂಡರು.
ಶಿಕಾರಿಪುರ ಪುರಸಭೆ ಕಾಯಾðಲಯಕ್ಕೆ ಸಂಭಂಧಿಸಿದ Public Disclosure Law 2011-12 ರ ಅಧð ವಷðದ ಮತ್ತು 2010-11 ನೇ ಸಾಲಿನ ಪೂರ್ಣ ವಿವರವನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅದನ್ನು PDL ಮೆನುವಿನಲ್ಲಿ ನೋಡಬಹುದು.
ಜನನ ಮತ್ತು ಮರಣ ಪ್ರಮಾಣ ಪತ್ರಗಳ ಬಗ್ಗೆ ಆನ್ ಲೈನ್ ಮೂಲಕ ನೋಡಬಹುದು ಇಲ್ಲಿ ಕ್ಲಿಕ್ ಮಾಡಿ
ಸಾವðಜನಿಕರು ತಮ್ಮ ದೂರುಗಳನ್ನು ಆನ್ ಲೈನ್ ಮೂಲಕ ದಾಖಲಿಸಬಹುದು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಎಲ್ಲಾ ನಾಗರೀಕರಿಗೆ ಹಾಗೂ ವೀಕ್ಷಕರಿಗೆ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು
ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ
ಪುರಸಭಾ ಕಾರ್ಯಾಲಯ, ಶಿಕಾರಿಪುರ.
This Page is Maintained By : Mr. Ashok Kumar B R, Office Manager

